WELCOME TO ANEKAL...... 11254aupsanekal.blogspot.in ........

Thursday, November 17, 2016

ಕನ್ನಡ ಭಾಷೆಯ ಜ್ಞಾನವಿಲ್ಲದ ಜಿಲ್ಲಾ ಶಿಕ್ಷಣಾಧಿಕಾರಿಗಳ ನೇಮಕಾತಿಗೆ
ತಡೆಯಾಜ್ಞೆ-ಕನ್ನಡಿಗರಿಗೆ ಸಂದ ವಿಜಯ-ಕನ್ನಡ ಅಧ್ಯಾಪಕ ಸಂಘ
 ಕಾಸರಗೋಡು ಭಾಷಾ ಅಲ್ಪಸಂಖ್ಯಾತ ಪ್ರದೇಶವಾಗಿದ್ದು ಇಲ್ಲಿನ ಜಿಲ್ಲಾ ಶಿಕ್ಷಣಾಧಿಕಾರಿ ಮತ್ತು
ಇನ್ನಿತರ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಕನ್ನಡದವರೇ ಆಗಬೇಕೆಂದು ಸರಕಾರದ
ನಿಯಮವಿದ್ದರೂ ಅಧಿಕೃತರ ಅನಾಸ್ಥೆಯಿಂದ ಕನ್ನಡ ತಿಳಿಯದ ಅಧಿಕಾರಿಗಳು ಪದೇ ಪದೇ ನುಸುಳಿ
ಕನ್ನಡಿಗರ ನಿದ್ದೆ ಕೆಡಿಸುತ್ತಿದ್ದಾರೆ.
ಅಂತೆಯೇ ಇತ್ತೀಚೆಗೆ ನೇಮಕಗೊಂಡ ಕಾಸರಗೋಡು ಜಿಲ್ಲಾ ಶಿಕ್ಷಣಾಧಿಕಾರಿ ನೇಮಕಾತಿಯ ವಿರುದ್ದ
ಕೇರಳ ಉಚ್ಛ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.ಎರಡು ವಾರಗಳ ಅವಧಿಯೊಳಗೆ ಶಿಕ್ಷಣಾಧಿಕಾರಿಗಳ
ಅರ್ಹತಾ ಪಟ್ಟಿಯನ್ನು ಪರಿಷ್ಕರಿಸಿ ಕಾಸರಗೋಡಿಗೆ ಕನ್ನಡದ ಶಿಕ್ಷಣಾಧಿಕಾರಿಯನ್ನು
ನೇಮಿಸಬೇಕೆಂದು  ನ್ಯಾಯಾಲಯ ತಾಕೀತು ಮಾಡಿದೆ.
ಕನ್ನಡ ತಿಳಿಯದ ಅಧಿಕಾರಿಗಳ ನೇಮಕಾತಿಯ ವಿರುದ್ಧವಾಗಿ ಕೇರಳ ಪ್ರಾಂತ್ಯ ಕನ್ನಡ ಮಾಧ್ಯ
ಅಧ್ಯಾಪಕ ಸಂಘಟನೆಯು ನೇರವಾಗಿ ಶಿಕ್ಷಣ ಸಚಿವರನ್ನು ಭೇಟಿ ಮಾಢಿ ವಿರೋಧವನ್ನು
ವ್ಯಕ್ತಪಡಿಸಿದರೂ ಮನವಿಯನ್ನು ಕಡೆಗಣಿಸಿದುದರಿಂದ ಅನಿವಾರ್ಯವಾಗಿ ನ್ಯಾಯಾಲಯದ
ಮೆಟ್ಟಲೇರಬೇಕಾಯಿತು. ನ್ಯಾಯಾಲಯದ ನಡೆಗೆ ಸಂಘಟನೆ ಹರ್ಷ ವ್ಯಕ್ತಪಡಿಸಿದೆ.
ಇನ್ನು ಮುಂದೆ ಕಾಸರಗೋಡಿನಲ್ಲಿ ನೆನೆಗುದಿಗೆ ಬಿದ್ದ ಎಲ್ಲಾ ಕನ್ನಡ ಹುದ್ದೆಗಳು
ಕನ್ನಡದವರಿಗೇ ಸಿಗುವಂತೆ ಇನ್ನಷ್ಟು ಹೋರಾಟ ಮಾಡಬೇಕಾಗಿದೆಯೆಂದು ಅಭಿಪ್ರಾಯಪಟ್ಟಿದೆ.
ಬಿ.ಆರ್.ಸಿ., ಸರ್ವಶಿಕ್ಷಣ ಅಭಿಯಾನದ ಅಧಿಕಾರಿಗಳು, ಆರ್.ಎಂ.ಎಸ್.ಎ. ಅಧಿಕಾರಿಗಳು,
ಐ.ಟಿ.ಕೋರ್ಡಿನೇಟರ್ ಮೊದಲಾದ ಮರ್ಮ ಪ್ರಧಾನವಾದ ಹುದ್ದೆಗಳು ಕನ್ನಡಿಗರಿಗೆ ನಷ್ಟವಾಗಿದೆ
ಇವುಗಳನ್ನು ತಿರುಗಿ ಪಡೆಯುವ ವರೆಗೆ ವಿಶ್ರಮಿಸಲಾರೆವೆಂದು ಸಂಘಟನೆ ಧ್ವನಿಯೆತ್ತಿದೆ.
🙏🏼🙏🏼🙏🏼🙏🏼🙏🏼🙏🏼🙏🏼

No comments:

Post a Comment